ಮುಂಜನೆಯ ಸೋಬಗು…

ಹೀಗೆ ಒಂದು ಕನಸು ಬಿದ್ದಿತ್ತು.. ಅದೇನೋ ಕ್ಲೈಮಾಕ್ಸ್ ಬರೋಹೊತ್ತಿನಲ್ಲಿ ದಿಡೀರನೆ ಎಚ್ಚರ ಅಯ್ತು… ಛೇ ಅಂತ ಎದ್ದು ಕೂತೇ… ಹಾಗೆ ಗಡಿಯಾರದ್ ಕಡೆ ಕಣ್ಣ್ ಹಾಯ್ಸಿದೆ ಟೈಮ್ ಆಗ್ಲೆ ೫:೩೦ ಆಗಿತ್ತು.. ಕಿಟಕಿ ಸಂದಿಯಿಂದ ಸುಯ್ಯ್ ಅಂತ ತಂಗಾಳಿ ಕವಿತೆ ಆರಂಭ ಮಾಡಿತ್ತು… ಯಾಕೋ ಮತ್ತೆ ನಿದ್ದೆ ಹೋಗೊಕೆ ಮನಸ್ಸಗ್ಲಿಲ್ಲ.. ಕಿಟಕಿನ ಪೂರ್ತಿ ತೆಗೆದು ತಂಗಾಳಿಯ ಹಾಡನ್ನು ಕೇಳ್ತ ಕೂತ್ಕೋಂಡೆ.. ಟೈಮ್ ಹಾಗೆ ೬:೦೦ ಆಗೆ ಬಿಡ್ತು.. ಹಾಗೆ ಸ್ವಲ್ಪ ದೂರ ಕಣ್ಣ್ ಹಾಯಿಸಿದೆ ಅಲ್ಲೆ ದೂರದಲ್ಲಿ ನಮ್ಮ್ ಬಾಸು ಸೂರ್ಯ ದೇವರು ಫ಼ುಲ್ಲ್ ಕಲರ್ಫ಼ುಲ್ ಆಗಿ ಮನೆಯಿಂದ ಹೋರಗಡೆ ಬರೋಕೆ ಇಣುಕಿ ನೋಡ್ತ ಇದ್ದ್ರು… ವಾಹ್ ವಾಹ್ ಏನ್ ಲುಕ್ಕ್ ಅಂತೀರ ಯಾರ್ ಈ ನಮ್ಮ್ ಬಾಸ್ ಗೆ ಇಷ್ಟೋಂದ್ ಬಣ್ಣ ಹಚ್ಚುತ್ತಾರೆ ಅನ್ನುಸ್ತು…

60
Open your EYES!

ಆ ಬಣ್ಣಗಳು ನಿಜವಾಗ್ಲು ಆ ಕ್ಷಣ ಸ್ವರ್ಗದ್ ಬಾಗಿಲೇ ತೆಗೆದಿರೋ ತರ feel ಆಗ್ತ ಇತ್ತು… ಏನ್ ಚಂದನೋ ನಮ್ಮ್ ಸೂರ್ಯ ದೇವ್ರುದು.. ಹೀಗೆ ನೋಡ್ ನೋಡ್ತನೆ ತನ್ನ ಸುಂದರವಾದ ಆಕಾರವನ್ನು ತನ್ನ ಗೂಡಿನಿಂದ ಹೋರ ತಂದ.. ಆಬ್ಬಾ! ಒಂದ್ ಸೆಕೆಂಡ್ ಆ ಕಾಮನಬಿಲ್ಲು ನಾಚಿಕೊ ಬೇಕು ಅಲ್ಲ ಅಲ್ಲ ಹೋಟ್ಟೆ ಉರ್ಕೊಳ್ಳೊ ತರ ಇತ್ತು.. ಇ ದಿನ ಏನ್ ಅಗುತ್ತೋ ಬಿಡುತ್ತೋ ಅದ್ರೇ ತಪ್ಪದೇ ನಮಗೆ ಪ್ರತಿದಿನ ಯಾವತ್ತು ಮಿಸ್ಸ್ ಮಾಡದಂಗೆ ಬರ್ತಾನೆ.. ಬಂದು ನಮ್ಮ್ ಜೀವನದಲ್ಲಿ ಬಣ್ಣ ಹಚ್ಚಿ ಹೋಸ ಹೋಸ ಆಸೆ, ಭರವಸೆಗಳ್ನ ತುಂಬೊ ಈ ಸೂರ್ಯ ಪ್ರಭುನ ಬೆಳ್ಳ್ ಬೆಳ್ಳಿಗ್ಗೆ ನೋಡೊದೆ ಒಂದ್ ಖುಷಿ, ಒಂದ್ ನಂಬಿಕೆ. ಹೀಗೆ ನಮ್ಮ್ ಸೂರ್ಯ ದೇವ್ರು ತರನೆ ನಮ್ಮ್ ದಿನನು ಕಲರ್ ಫ಼ೂಲ್ ಆಗಿ ಸ್ಟಾರ್ಟ್ ಆಗಿ ಕಲರ್ ಫ಼ೂಲ್ ಆಗಿ ಎಂಡ್ ಆದ್ರೆ ಏನ್ ಖುಷಿ ಅಂತೀರ… ನಿಜವಾಗ್ಲು ನನ್ನ್ ಕಡೆಯಿಂದ ಈ ಸೂರ್ಯ ದೇವ್ರುಗೆ ಒಂದ್ ಸಲಾಂ…

DSC03330
Sunrise/Sunset is still my favourite colour… Rainbow is second 🙂

 

 

Advertisements

Author: Ugly Indian

Simple♥, Humble♥, Generous♥, L♥vable, and Goes on....♥♥ ツ Engineering by Choice, Banker as a Profession 😉. Photography has become my favourite activity since my Engineering days, and now it turned out to be a part of my Life. It's my Passion actually ☺ and Blogging is adding cherry to the cake for my Photography! 😆

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s