ಮಾತಿಲ್ಲ.. ಕಥೆಯಿಲ್ಲ.. ಬರೀ “ರೋಮಾಂಚನ”

“ಸ್ವಾತಂತ್ರ್ಯ” ಇದು ಬರೀ ಒಂದು ಪದ ಮಾತ್ರ ಅಲ್ಲ, ಇದೊಂದು ಶಕ್ತಿ, ಉತ್ಸಹ ಮತ್ತು ಸ್ವಾವಲಂಭನೆಯ ಸಂಕೇತ. ಈ ಪದವನ್ನು ಸ್ವಂತ ಮಾಡಿಕ್ಕೋಳ್ಳೋದ್ದಕ್ಕಗಿ ನಮ್ಮ ಹೋರಾಟಗಾರರ ಶ್ರಮ, ಹೋರಟ, ಹರಿಸಿದ ನೇತ್ತರು ಅಪಾರ ಮತ್ತು ಶ್ಲಾಘನೀಯ. 🙂

https://www.facebook.com/SathishPhotography
The feel that never ends… PATRIOTISM!

ಒಮ್ಮೆ ಚಂದ್ರಶೇಖರ್ ತಿವಾರಿ ಎಂಬ ಯುವಕ ತನ್ನ ಕೋಪ ಆವೇಷವನ್ನು ತಡೆಯಲಾರದೆ ಪೋಲಿಸರಿಗೆ ಕಲ್ಲಿನಿಂದ ಹೋಡೆಯುತ್ತಾನೆ. ಈ ಕಾರಣಕ್ಕಾಗಿ ಪೋಲಿಸರು ತಿವಾರಿಯನ್ನು ಬಂಧಿಸಿ ನ್ಯಾಯಲಾಯಕ್ಕೆ ಕರೆತರುತ್ತಾರೆ. ಅಲ್ಲಿ ನ್ಯಾಯಧೀಶರು, ನೀನ್ನ ಹೆಸರೇನು ಎಂದು ಪ್ರಶ್ನೀಸಿದಾಗ ಆ ಯುವಕ ನನ್ನ ಹೆಸರು “ಸ್ವಾತಂತ್ರ್ಯ” [Azad] ಎನ್ನುತ್ತಾನೆ. ಮತ್ತೇ ನ್ಯಾಯಧೀಶರು, ನೀನ್ನ ತಂದೆ ಯಾರೆಂದು ಪ್ರಶ್ನೀಸಿದಾಗ “ಸ್ವಾತಂತ್ರ್ಯತೆ”ಯೆ ನನ್ನ ತಂದೆ ಎನ್ನುತ್ತಾನೆ. ಕೋಪಗೋಂಡ ನ್ಯಾಯಧೀಶ  ನೀನ್ನ ಸ್ಥಳ ಯಾವುದೇಂದು ಕೇಳಿದಾಗ, ಸದ್ಯಕ್ಕೆ “ಸೆರೆಮನೆ”ಯೆ ನನ್ನ ಮನೆಯೆಂದು ದಿಟ್ಟತನದಿಂದ ಉತ್ತರಿಸುತ್ತಾನೆ. ಹೌದು, ಆ ಯುವಕನೇ ಅಂದಿನಿಂದ “ಚಂದ್ರಶೇಖರ್ ಅಜಾದ್” ಎಂದು ಪ್ರಚಲೀತನಾಗಿ, ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮತ್ತಷ್ಟು ಬೆಳಕು ತರುತ್ತಾನೆ.
ಅಬ್ಬಾ! ಇಂಥಾ ನೈಜ ಘಟನೆಗಳೆ ನಮ್ಮ ಜೀವನಕ್ಕೆ ಸ್ಪೂರ್ತೀಯಾಗಬೇಕು. ಇದೇ ನಿಜವಾದ “ಸ್ವಾತಂತ್ರ್ಯ”. ಮಾತಿಲ್ಲ ಕಥೆಯಿಲ್ಲ ಬರೀ .. ರೋಮಾಂಚನ ಮತ್ತು ಹೆಮ್ಮೆ!

ಮಾಹಿತಿ – ಸ್ವಲ್ಪ ಓದಿದ್ದು..ಸ್ವಲ್ಪ ಕೇಳಿದ್ದು. 🙂

Advertisements