ಹನಿ ಹನಿಗಳ ಕಹಾನಿ!

ಪ್ರತಿ ಪ್ರತಿ ಹನಿಯಲ್ಲೂ ಸಾವಿರಾರು ಕಥೆಗಳಿವೆ, ಪ್ರತಿ ಕಥೆಗೆ ಅದರದೆ ಆದ ಅರ್ಥಗಳಿವೆ. ಆ ಪ್ರತಿ ಅರ್ಥಕ್ಕೂ ವಿಭಿನ್ನ ದಾರಿಗಳಿವೆ. ಹನಿ ಹನಿಯು ನಮ್ಮ ಜೀವನದ ದಿನಗಳಿಗೆ ಹೋಲಿಸಬಹುದು. ಪ್ರತಿ ಹನಿಯನ್ನು ಉಪಯುಕ್ತಗೋಳಿಸುವುದು ನಮ್ಮ ಕೈಯಲ್ಲಿ ಇರುತ್ತದೆ. ನಾವು ಅದನ್ನು ಹೇಗೆ ಉಳಿಸಿ ಉಪಯೋಗಿಸಿಕ್ಕೋಳ್ಳುತ್ತಿವೋ ಅದು ನಮ್ಮ ಈ ದಿನದ ಮತ್ತು ಮುಂದಿನ ದಿನಗಳಿಗೆ ಸಂಕಲನವಾಗುತ್ತದೆ. ಈ ರೀತಿ ಸಂಕಲನವಾದ ಹನಿಗಳೆ ಮುಂದಿನ ದಿನಗಳಲ್ಲಿ ಕೆರೆ, ತೊರೆ, ನದಿ, ಸಮುದ್ರವಾಗಿ ನಮ್ಮ ಜೀವ ಹಾಗು ಜೀವನೆಕ್ಕೆ ನಾಂದಿಯಾಗುತ್ತದೆ. ಇತ್ತೀಚೆಗೆ “ವಿಶ್ವ ನೀರಿನ ದಿನ” ವನ್ನು ಮಾರ್ಚ್ 22 ರಂದು  ಪ್ರಪಂಚದ್ಯಾಂತ ಸ್ವಲ್ಪ ಪ್ರಮುಖ್ಯತೆಯಿಂದಲೆ ಆಚರಣೆ ಮಾಡಲಾಯಿತು.

ಆದರ ಪ್ರಯುಕ್ತ ಈ ನನ್ನ ಕಿರು ಕೋರಿಕೆ ಅದೇನಂದರೆ “ಪ್ರತಿ ಹನಿಯನ್ನು ನಿಮ್ಮ ಜೀವನದ ಪ್ರತಿ ದಿನಕ್ಕೆ ಹೋಲಿಸಿಕ್ಕೋಳ್ಳಿ” ಈ ಚಿಕ್ಕ ಪ್ರಯತ್ನವು ನೀಮಲ್ಲಿ ಪ್ರಯಶಹ ದಿನಕ್ಕೆ ಒಂದು ಬಕೆಟ್ ನೀರಾನ್ನದರು ಉಳಿಸಬಹುದು. ಈ ಚಿಕ್ಕ ಸಂದೇಶದ ಜೋತೆಗೆ ನಾನು ಕ್ಲಿಕ್ಕಿಸಿದ ಕೇಲ ಹನಿ ಹನಿಗಳ ಕಹಾನಿಯು ನಿಮ್ಮ ಮುಂದಿದೆ.

https://www.facebook.com/SathishPhotography/https://www.facebook.com/SathishPhotography/

https://www.facebook.com/SathishPhotography/

https://www.facebook.com/SathishPhotography/

 

 

1

4
https://www.facebook.com/SathishPhotography/

ನೋಡಿ,
ಇಷ್ಟವಾದರೆ ಲೈಕ್ ಮಾಡಿ. 😛
ಬಹಳ ಇಷ್ಟವಾದರೆ ಶೇರ್ ಮಾಡಿ. 😀

ಧನ್ಯವಾದಗಳು 😉

 

 

 

 

 

Advertisements

ಬರುತ್ತಿದ್ದಾನೆ ಶ್ರೀಮನ್ನಾರಾಯಣ!!!

“ನೀ ಇರಬೇಕಿತ್ತಿಲ್ಲಿ” ಅಂತ ತುಗಲಕ್’ನಲ್ಲಿ ಪ್ರೇಕ್ಷಕರನ್ನ ಹುಡುಕಿ…
“Here we meet once again” ಅಂತ ಉಳಿದವರ್ ಕಂಡಂತೆ’ನ ದರ್ಶನ ತೋರಿಸಿ..
ಸಿಂಪಲ್ಲ್ ‘ಸಿಂಪಲ್ಲ್ ಆಗಿ ಒಂದು ಲವ್ ಸ್ಟೋರಿ’ನ ‘ವಾಸ್ತು ಪ್ರಕಾರ’ವಾಗಿ ಹೇಳಿ..
“ರಿಕ್ಕಿ”ಯಾಗಿ ಕಾಡು’ಕಿಚ್ಚಿನ ಪ್ರೀತಿನ ಪ್ರೇಕ್ಷಕರಿಗೆ ತಲುಪಿಸಿ…
“ಕಿರಿಕ್” ಇಲ್ಲದ್ದಾಂಗೆ ತಂಡದ ಮೊತ್ತವನ್ನು ಭರ್ಜರಿ ಶತಕದ ಹತ್ತಿರ ತಗೋಂಡು “ಪಾರ್ಟಿ” ಮಾಡ್ತಿರೋ ಟೈಮಲ್ಲಿ…

ಶ್ರೀಮನ್ನಾರಾಯಣನ ದರ್ಶನ ಮಾಡಿಸೋಕೆ ಹೋರಟಿದ್ದಾರೆ ನಮ್ಮ ಸಿಂಪಲ್ ಸ್ಟಾರ್ “ರಾಕ್ಷಿತ್ ಶೆಟ್ಟಿ”.
ಹೌದು “ಅವನೇ ಶ್ರೀಮನ್ನಾರಾಯಣ” ಚಿತ್ರದ ಮೂಲಕ. ಈ ಶ್ರೀಮನ್ನಾರಾಯಣನನ್ನು ತೆರೆಗೆ ತರುತ್ತಿರುವವರು ಸಿಂಪಲ್ ಆಗೋಂದ್ ಲವ್ ಸ್ಟೋರಿಯ ‘ಬಾನಲಿ ಬದಲಾಗೋ’ ಹಾಡಿನ್ನು ವಿಭಿನ್ನ ರೀತಿಯಲ್ಲಿ ಸಂಕಲನೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದ ಎಡಿಟರ್ ‘ಸಚಿನ್’. ಇದು ಅವರಿಗೆ ನಿರ್ದೆಶಕರಾಗಿ ಚೊಚ್ಚಲ ಸಿನಿಮಾ. “ಅವನೇ ಶ್ರೀಮನ್ನಾರಾಯಣ”ನನ್ನು ನಿರ್ಮಿಸುತ್ತಿರುವವರು ರಂಗಿತರಂಗ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಕಿರಿಕ್ ಪಾರ್ಟಿ ಸಿನಿಮಾದ ನಿರ್ಮಾಪಕರು.

1
ಸದಾ ಹೋಸದನ್ನು ಕೋಡಬೇಕೇನ್ನುವ ಈ ತಂಡಕ್ಕೆ ಕನ್ನಡಾಭಿಮಾನಿಗಳ ಪ್ರೋತ್ಸಹ ಬೇಕಾಗಿದೆ. ಪ್ರೋತ್ಸಹ ಅನ್ನೋದು ಅವರ ಬೆನ್ನೆಲುಬು ಆಗಿದ್ರೆ, ಮತ್ತೋಂದು ಒಳ್ಳೆ ಚಿತ್ರ ಮೂಡಿಬರುವುದರಲ್ಲಿ ಅನುಮಾನವೇ ಇಲ್ಲ. So Lets Welcome and Support

“ಅವನೇ ಶ್ರೀಮನ್ನಾರಾಯಣ”  🙂

 

 

ಮುಂಜಾವು ಮೂಡೋದೆ ಚಂದ!

ಹೇಳಿ ಕೇಳಿ ನಮ್ದು ಇಂಜಿನಿಯರಿಂಗ್ ಬ್ಯಾಕ್ ಗ್ರೌಂಡು ಬೆಳ್ಳಿಗ್ಗೆ ಬೇಗ ಏಳೊ ಅಭ್ಯಾಸನೇ ಮರೆತುಹೋಗಿದೆ ಅಂದ್ರು ಎನ್ ಕಿರಿಕ್ ಅನ್ಸಲ್ಲ. ಹಾಂಗಂತ ನಾನೇನು ಸೋಂಬೆರಿ ನು ಅಲ್ಲ ಏನೋ ಬೆಳ್ಳಗ್ಗೆ ಏಳು ಗಂಟೆ ಮುಂಚೆ ಏಳೊದು ಕಮ್ಮಿ ಆಗಿದೆ ಅಷ್ಟೇ.. ಡೈಲಿ ನಾನ್ ಏಳೊ ಹೋತ್ತಿಗೆ ಅಗ್ಲೆ ನಮ್ಮ ಸೂರ್ಯ ದೇವ್ರು ಒಂದ್ ರೌಂಡ್ ವಾಕಿಂಗ್ ಮುಗಿಸಿ ಒಂದ್ ಕಪ್ ಕಾಫಿ ಹಿರುತ್ತ ನಮ್ಮ್ ಜನ್ಮಕ್ಕೆ ನಾಚಿಕೆ ಆಗೋಹಾಗೆ ಆಕಾಶದಲ್ಲಿ ಸೆಟ್ಲ್ ಆಗಿರ್ತಾರೆ ಅಷ್ಟೆ.

ಈ ಸೂರ್ಯ ಹೇಗೆ ಬರ್ತನೇ, ಹೇಗೆ ರಂಗನ್ನು ಬೀರ್ತಾನೆ ಆನ್ನೋದ್ದನ್ನ ನೋಡೋಕೆ ಬಹಳ ದಿನಗಳಿಂದ ಏಲ್ಲೋ ಹಾರ್ಟ್ ಕರ್ನಾರ್ ಅಲ್ಲಿ ಒಂದು ಆಸೆ ಇತ್ತು. ಜೋತೆಗೆ ಇಂಜಿನಿಯರಿಂಗ್ ಮಾಡುವಾಗ್ಲೆ ಫೋಟೊಗ್ರಾಫಿ ಆಸೆ ಮತ್ತೆ ಕ್ಯಾಮಾರ ತಗ್ಗೋಳ್ಳೊ ಶೋಕಿ ಬೇರೆ ಇತ್ತು. ಶೋಕಿ ಅನ್ನೋದ್ ಕ್ಕಿಂತ ಲೈಫ್ ಬೇಜಾರ್ ಆದಾಗ ನಮ್ಮ ಜೋತೆ ಇದ್ದು ನಮ್ಮ ಮನಸ್ಸ್ ಮೇಲೆ ರೈಟ್ ಕ್ಲಿಕ್ ಮಾಡಿ ರಿಪ್ರೇಶ್ ಮಾಡೊ ಧಮ್ ಇದೆ ಇದ್ದಕ್ಕೆ ಅಂತ ಒಂದು ನಂಬಿಕೆ ಇತ್ತು ಮತ್ತು ಅದು ನಿಜ ಕೂಡ!

ನನ್ನ ಆಸೆಗಳ್ಗೆ ಈ ಕ್ಯಾಮರ, ಫೋಟೊಗ್ರಾಫಿ ಅನ್ನೋದು ಅಮಾವಾಸೆ ನೈಟ್ ಅಲ್ಲಿ ಅಲ್ಲೇಲ್ಲೋ ಮೂಲೆಲೀ ಬೆಳಕು ಚೆಲ್ಲೋ ಬೀದಿ ದೀಪ ಇದ್ದಾಂಗೆ! ಹಿಗೂರುವಾಗ ನನ್ನ ಬಹಳ ದಿನಗಳ ಪ್ರೀತಿ ಈ ಸೂರ್ಯನ್ನ ಅವ್ನ್ ಹುಟ್ಟೋದು ನೋಡಕ್ಕೆ ಅದನ್ನ ನಂದೆ ಆದ ಕ್ಯಾಮರದಲ್ಲಿ ಸೆರೆಹಿಡಿಯಕ್ಕೆ ಆದ ಖುಷಿ ಅಷ್ಟಿಷ್ಟಲ್ಲ. ಆ ಕೆಲವು ಸೆರೆಹೆಡಿದ ಛಾಯಚಿತ್ರಗಳು ಇಲ್ಲೀವೆ. ನಿಮ್ಗ್ ಇಷ್ಟ ಅದ್ರೆ ಖುಷಿ ಪಡಿ. ಸರಿಯಿಲ್ಲ ಅಂದ್ರೆ ಕಮೆಂಟ್ ಬಾಕ್ಸ್ಲ್ ಲ್ಲಿ ನಿಮ್ಮ ಸಲಹೆಗಳ್ನ ಹಾಂಗೆ ಬೀಡ್ರಿ!

9
https://www.facebook.com/SathishPhotography

 

7
https://www.facebook.com/SathishPhotography
8
https://www.facebook.com/SathishPhotography

10

https://www.facebook.com/SathishPhotography

 

ಗೋಧಿ ಬಣ್ಣ “ಆಸಾಧರಣ” ಮೈಕಟ್ಟು

‘ರಂಗ ಭೂಮಿಯೇ ಈ ಜಗ’ ಎಂಬ ಸಾಗರದಲ್ಲಿ, ‘ಆಲೆ ಮೂಡದೆ’ ನಿಂತಿರುವ ಸಮಯದಲ್ಲಿ ಎಲ್ಲೆಡೆ ಬರಿ ‘ಮೌನ ಮೌನ’ದ ಏಕಂತದಲ್ಲಿ, ಎಲ್ಲವು ‘ಆಯೋ ಮಯ’ವಾದ ಸ್ಥೀತಿಯಲ್ಲಿ, ‘ಕೋಮಲ ಕೋಮಲ ಹೇಣ್ಣಿ’ನ ಜೊತೆ ‘ಈ ಸಂಜೆಗೆ ಆ ಭಾನನು ತಾರೆಯ ಜೋತೆ ಸೇರಿ ಅಲಂಕರಿಸು’ವ ಕನಸೋಂದು ‘ಗಾಸಿ ಗುಮ್ಮನ’ ಜೊತೆ ಸೇರಿ “ಅಸಾಧರಣ” ‘ಕಥೆಯೊಂದು ಶುರುವಾಗಿದೆ’. 🙂

 

ಹೌದು, ಇದು “ಗೋಧಿ ಬಣ್ಣ ಸಾಧರಣ ಮೈಕಟ್ಟು” ಚಿತ್ರದ ಹಾಡುಗಳು. ಇಲ್ಲಿ ಎಲ್ಲಾ “ಆಸಾಧರಣ”, ಹೊಸ ನಿರ್ದೇಶಕ, ಹೊಸ ಕಥೆ, ಹೊಸ ನಿರ್ಮಾಪಕ, ಹೊಸ ಸಂಗೀತ ನಿರ್ದೇಶಕ, ಹೊಸ ಸಂಗೀತದ ಅಲೆ, ಹೊಸ ಸಾಹಿತ್ಯ, ಹೊಸಬರ ಸಾಹಿತ್ಯ, ಎಲ್ಲಾ ಹಾಡುಗಳ ಸಾಹಿತ್ಯ ಕನ್ನಡಮಯ. ಹೊಸ ಗಾಯಕರು ಮತ್ತು ಮುಖ್ಯ ಭೂಮಿಕೆಯಲ್ಲಿ ಪಾತ್ರಕ್ಕೆ ಜೀವ ತುಂಬುವ ನಟ ಆನಂತ್ ನಾಗ್, ಭವಿಷ್ಯದ ಆನಂತ್ ನಾಗ್ ಆದ ಕ್ರಿಯಶೀಲ ನಟ ರಕ್ಷಿತ್ ಶೆಟ್ಟಿ, ಮತ್ತು ಎಲ್ಲಾರಿಗು ಇಷ್ಟ ಆಗುವ ನಟಿ ಶೃತಿ ಹರಿಹರನ್ ಇದ್ದು. ಒಟ್ಟಿನಲ್ಲಿ ಎಲ್ಲಾ ಹೊಸಬರು ಕೈ ಜೋಡಿಸಿ ಒಂದು “ಆಸಾಧರಣ” ಚಿತ್ರವನ್ನು ತೆರೆಗೆ ತರಲು ಕಾಯುತ್ತಿದ್ದಾರೆ. 😀

 

ಕನ್ನಡದಲ್ಲಿ ಇದು ನಿಜವಾಗಿಯು ಒಂದು ಆಸಾಧರಣ ಸಂಚಲನ, ದಿನ ಪೂರ್ತಿ ಈ ಚಿತ್ರದ ಹಾಡುಗಳ ಸಾಗರದಲ್ಲಿ ಮುಳುಗಿದ್ದೇನೆ. ಚಿತ್ರ ನೋಡಲು ಬಹಳ ಉತ್ಸುಕನಾಗಿದ್ದೇನೆ. ಬಹಳ ಬೇಗ ತೆರೆಗೆ ಬರಲಿ, ತೆರೆಗೆ ಬಂದು ನಮ್ಮನ್ನು ರಂಜಿಸಲಿ. ಈ ಅಲೆಯನ್ನು ಸೃಷ್ಟಿಸಿರೋ ಈ ತಂಡಕ್ಕೆ ನಮ್ಮ ಕಡೆಯಿಂದ ಶುಭ ಹಾರೈಕೆಗಳು. 🙂 🙂

ಹೊಸ ‘ಕಿರಿಕ್’ ಮಾಡ್ತಿವಿ…

“ನೀ ಇರಬೇಕಿತ್ತಿಲ್ಲಿ” ಅಂತ ತುಗಲಕ್’ನಲ್ಲಿ ಪ್ರೇಕ್ಷಕರನ್ನ ಹುಡುಕಿ…
“Here we meet once again” ಅಂತ ಉಳಿದವರ್ ಕಂಡಂತೆ’ನ ದರ್ಶನ ತೋರಿಸಿ..
“ರಿಕ್ಕಿ”ಯಾಗಿ ಕಾಡು’ಕಿಚ್ಚಿನ ಪ್ರೀತಿನ ಪ್ರೇಕ್ಷಕರಿಗೆ ತಲುಪಿಸಿ…

ಇಗ ನಾವ್ ಯಾರಿಗು ಕಮ್ಮಿ ಇಲ್ಲ, ನಾವು “ಕಿರಿಕ್” ಮಾಡ್ತಿವಿ, “ಕಿರಿಕ್ ಪಾರ್ಟಿ” ಮಾಡ್ತಿವಿ ಅಂತ ಹೇಳ್ತಿರೋದು ನಮ್ಮ್ ಶೆಟ್ಟ್ರು ಹುಡುಗ್ರು ರಾಕ್ಷಿತ್ ಶೆಟ್ಟಿ and ರಿಶಭ್ ಶೆಟ್ಟಿ.

 

FB_IMG_1458214581505
Pic by Rakshith Shetty

 

ಈ ಸಿನಿಮಾ ಇವ್ರ ಕಂಬಿನೇಶನ್’ನ ಮೂರನೇ ಚಿತ್ರ. ಕನ್ನಡ ಜನಕ್ಕೆ ಯಾವಾಗ್ಲು ಹೋಸದೆನ್ನನ್ನದರು ಕೋಡಬೇಕು ಅನ್ನೋ ಈ ಟೀಮ್’ಗೆ ಒಂದು green ಸಲಾಂ.. ಈ ಚಿತ್ರದ ಮುಖಾಂತರ ಮತ್ತೇ Simple ನಿರ್ದೇಶಕ ಸುನಿ ಯವರು “ಉಳಿದವರು ಕಂಡಂತೆ” ನಂತರ ಜೋತೆ ಆಗ್ತ ಇದ್ದಾರೆ. ಒಂದು ಹೋಸ concept, ಮತ್ತು ಅದೇ ಹಳೆ ಹಿಟ್ ಕಂಬಿನೇಷನ್ ಜೋತೆಯಾಗಿದ್ದರೆ ಅಂದ್ರೆ ಮತ್ತೆ ನಮ್ಮ ಕನ್ನಡ ಪ್ರೇಕ್ಷಕರಿಗೆ ಒಂದು ಹೋಸ ಕಾಲೇಜು ಸ್ಟೋರಿ ಹೇಳೋಕೆ ರೆಡಿ ಅಗ್ತ ಇದಾರೆ..ಮತ್ತೇ ವಿಶೇಷ ಅಂದ್ರೆ.. ಈ ಚಿತ್ರ ತಂಡವು ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಮತ್ತು ರಿಕ್ಕಿ ಯ ತಂಡವನ್ನು ಒಳಗೋಂಡಿದೆ.

ಈ ಚಿತ್ರಕ್ಕೆ ಬಂಡವಾಳವನ್ನು ಸ್ವತಹ ರಾಕ್ಷಿತ್ ಶೆಟ್ಟಿರವರ ಹೋಸ “ಪರಂವಹ” ಸ್ಟುಡಿಯೋ’ನ ಮೂಲಕ ಹೋರ ಬರಲಿದೆ. ಹಾಗೂ ಈ ತಂಡವು ಒಂದು ಹೋಸ ತಾರಗಣವನ್ನು ಹುಡುಕುತ್ತ ಇದೆ, ಸದ್ಯಕ್ಕೆ ರಾಕ್ಷಿತ್ ಶೆಟ್ಟಿಯವರಿಗೆ ಹೋಸ ಹೀರೋಯಿನ್’ನ ಹುಡುಕೋದರಲ್ಲಿ ಚಿತ್ರ ತಂಡ ಬ್ಯೂಸಿಯಾಗಿದೆ ಮತ್ತು ಮೈಸೂರ್’ನಲ್ಲಿ ಲೋಕೆಶನ್’ಗೋಸ್ಕರ ಹುಡುಕಾಟ ನಡೆಸಿದೆ.

 

FB_IMG_1458214617384
Poster of the upcoming Movie “Kirik Party” 

ಸದಾ ಹೋಸದನ್ನು ಕೋಡಬೇಕೇನ್ನುವ ಈ ತಂಡಕ್ಕೆ ಕನ್ನಡಾಭಿಮಾನಿಗಳ ಪ್ರೋತ್ಸಹ ಬೇಕಾಗಿದೆ. ಪ್ರೋತ್ಸಹ ಅನ್ನೋದು ಅವರ ಬೆನ್ನೆಲುಬು ಆಗಿದ್ರೆ, ಮತ್ತೆ ಒಂದು ಒಳ್ಳೆ ಚಿತ್ರ ಮೂಡಿಬರುವುದರಲ್ಲಿ ಅನುಮಾನವೇ ಇಲ್ಲ. So ಹೋಸ ಕಿರಿಕ್’ಗೆ ನಾನ್ ಫ಼ುಲ್ ರೆಡಿ. ಮತ್ತೆ party ಮಾಡಕ್ಕೆ ನೀವು ರೆಡಿಯಾಗಿ, ಒಟ್ಟಿಗೆ “ಕಿರಿಕ್ ಪಾರ್ಟಿ’ಲಿ ಬೇಟಿಯಾಗೋಣ.  🙂

ಬಾಗಿಲನು ತೆರೆದು…

ಈ ಜೀವನ ಅನ್ನೋದು ಒಂದು ಮನೆ ಇದ್ದಹಾಗೆ! ನಾವ್ ಯಾರದ್ರು ಬಂದು ಬಾಗಿಲು ತೆಗಿಲು ಅಂತ ಸುಮ್ಮನೆ ಕೂರಬಾರದು.. ನಮ್ಮ ಜೀವನದ ಬಾಗಿಲನ್ನ ಯಾವಗಲೂ ಆವಕಾಶಗಳಿಗೆ, ಸಹೃದಯ ಕೆಲಸಗಳಿಗೆ ಯಾವಗಲು ತೆರೆದಿಟ್ಟಿರಬೇಕು, But ಈ ಅವಕಾಶ ಅನ್ನೋದು ಯಾವಗಲು ನಮ್ಮ ಮನೆ ಬಾಗಿಲು ಹತ್ತರ ಇರಲ್ಲ, ಅದು ಯಾವಗ್ಲೋ ಒಮ್ಮೆ ಬಂದು ತಟ್ಟುತ್ತೆ ಆಗ ನಾವು ನಮ್ಮ್ LUCK ಅಂತಿವಲ್ಲ ಅದ್ ಇದ್ರೆ ನಮ್ಮ್ ಲೈಫ಼್ SETTLE ಅದಂಗೇ.. ಇಲ್ಲ ಅಂದ್ರೆ ಗೋತ್ತಲ್ಲ? ಮತ್ತೇ ಈ ಲೈಫ಼್ ಯಾಕ್ ಬೇಕಪ್ಪ ಅನ್ನಿಸೋವಷ್ಟ್ ಬೇಜನ್ ಕಾಟ ಕೋಡುತ್ತೇ.. ನನಗೆ ಈದು EXPERIANCE ಆಗಿದೆ, ನಿಮ್ಗು ಒಂದಲ್ಲ ಒಂದ್ ರೀತಿ ಬರಬಹುದು. So ರೇಡಿಯಾಗಿರಿ.. 🙂

IMG_0978

ಈ ಚಿತ್ರ ಕ್ಲಿಕ್ ಮಾಡಿದ್ದು ನಾನೇ, ಅದೇ ಎಲ್ಲಿ ಅಂತೀರ? ಇದು ಸೋಮನಾಥಪುರದಲ್ಲಿರುವ ಕೇಶವ ದೇವಾಲಾಯದ ಮುಖದ್ವಾರ.. ನೀಮಗೆ ಇಷ್ಟ ಅದ್ರೆ COMMENT ಮತ್ತೆ LIKE ಮಾಡಿ. ಥ್ಯಾಂಕ್ ಯು ಗೆಳೆಯರೆ.. 🙂

ಮುಂಜನೆಯ ಸೋಬಗು…

ಹೀಗೆ ಒಂದು ಕನಸು ಬಿದ್ದಿತ್ತು.. ಅದೇನೋ ಕ್ಲೈಮಾಕ್ಸ್ ಬರೋಹೊತ್ತಿನಲ್ಲಿ ದಿಡೀರನೆ ಎಚ್ಚರ ಅಯ್ತು… ಛೇ ಅಂತ ಎದ್ದು ಕೂತೇ… ಹಾಗೆ ಗಡಿಯಾರದ್ ಕಡೆ ಕಣ್ಣ್ ಹಾಯ್ಸಿದೆ ಟೈಮ್ ಆಗ್ಲೆ ೫:೩೦ ಆಗಿತ್ತು.. ಕಿಟಕಿ ಸಂದಿಯಿಂದ ಸುಯ್ಯ್ ಅಂತ ತಂಗಾಳಿ ಕವಿತೆ ಆರಂಭ ಮಾಡಿತ್ತು… ಯಾಕೋ ಮತ್ತೆ ನಿದ್ದೆ ಹೋಗೊಕೆ ಮನಸ್ಸಗ್ಲಿಲ್ಲ.. ಕಿಟಕಿನ ಪೂರ್ತಿ ತೆಗೆದು ತಂಗಾಳಿಯ ಹಾಡನ್ನು ಕೇಳ್ತ ಕೂತ್ಕೋಂಡೆ.. ಟೈಮ್ ಹಾಗೆ ೬:೦೦ ಆಗೆ ಬಿಡ್ತು.. ಹಾಗೆ ಸ್ವಲ್ಪ ದೂರ ಕಣ್ಣ್ ಹಾಯಿಸಿದೆ ಅಲ್ಲೆ ದೂರದಲ್ಲಿ ನಮ್ಮ್ ಬಾಸು ಸೂರ್ಯ ದೇವರು ಫ಼ುಲ್ಲ್ ಕಲರ್ಫ಼ುಲ್ ಆಗಿ ಮನೆಯಿಂದ ಹೋರಗಡೆ ಬರೋಕೆ ಇಣುಕಿ ನೋಡ್ತ ಇದ್ದ್ರು… ವಾಹ್ ವಾಹ್ ಏನ್ ಲುಕ್ಕ್ ಅಂತೀರ ಯಾರ್ ಈ ನಮ್ಮ್ ಬಾಸ್ ಗೆ ಇಷ್ಟೋಂದ್ ಬಣ್ಣ ಹಚ್ಚುತ್ತಾರೆ ಅನ್ನುಸ್ತು…

60
Open your EYES!

ಆ ಬಣ್ಣಗಳು ನಿಜವಾಗ್ಲು ಆ ಕ್ಷಣ ಸ್ವರ್ಗದ್ ಬಾಗಿಲೇ ತೆಗೆದಿರೋ ತರ feel ಆಗ್ತ ಇತ್ತು… ಏನ್ ಚಂದನೋ ನಮ್ಮ್ ಸೂರ್ಯ ದೇವ್ರುದು.. ಹೀಗೆ ನೋಡ್ ನೋಡ್ತನೆ ತನ್ನ ಸುಂದರವಾದ ಆಕಾರವನ್ನು ತನ್ನ ಗೂಡಿನಿಂದ ಹೋರ ತಂದ.. ಆಬ್ಬಾ! ಒಂದ್ ಸೆಕೆಂಡ್ ಆ ಕಾಮನಬಿಲ್ಲು ನಾಚಿಕೊ ಬೇಕು ಅಲ್ಲ ಅಲ್ಲ ಹೋಟ್ಟೆ ಉರ್ಕೊಳ್ಳೊ ತರ ಇತ್ತು.. ಇ ದಿನ ಏನ್ ಅಗುತ್ತೋ ಬಿಡುತ್ತೋ ಅದ್ರೇ ತಪ್ಪದೇ ನಮಗೆ ಪ್ರತಿದಿನ ಯಾವತ್ತು ಮಿಸ್ಸ್ ಮಾಡದಂಗೆ ಬರ್ತಾನೆ.. ಬಂದು ನಮ್ಮ್ ಜೀವನದಲ್ಲಿ ಬಣ್ಣ ಹಚ್ಚಿ ಹೋಸ ಹೋಸ ಆಸೆ, ಭರವಸೆಗಳ್ನ ತುಂಬೊ ಈ ಸೂರ್ಯ ಪ್ರಭುನ ಬೆಳ್ಳ್ ಬೆಳ್ಳಿಗ್ಗೆ ನೋಡೊದೆ ಒಂದ್ ಖುಷಿ, ಒಂದ್ ನಂಬಿಕೆ. ಹೀಗೆ ನಮ್ಮ್ ಸೂರ್ಯ ದೇವ್ರು ತರನೆ ನಮ್ಮ್ ದಿನನು ಕಲರ್ ಫ಼ೂಲ್ ಆಗಿ ಸ್ಟಾರ್ಟ್ ಆಗಿ ಕಲರ್ ಫ಼ೂಲ್ ಆಗಿ ಎಂಡ್ ಆದ್ರೆ ಏನ್ ಖುಷಿ ಅಂತೀರ… ನಿಜವಾಗ್ಲು ನನ್ನ್ ಕಡೆಯಿಂದ ಈ ಸೂರ್ಯ ದೇವ್ರುಗೆ ಒಂದ್ ಸಲಾಂ…

DSC03330
Sunrise/Sunset is still my favourite colour… Rainbow is second 🙂