ಭಾರತಕ್ಕಿಂದು ಅಗ್ನಿಪರೀಕ್ಷೆ

ಆಸ್ಟ್ರೇಲಿಯಾ ತಂಡದ ವಿರುದ್ಧದ ಏಕದಿನ ಸರಣಿಯ ಮೊದಲನೆಯ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡಿದ್ದ ಭಾರತ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಭಾರತ ತಂಡದ ಆಟಗಾರರಿಗೆ ಇದು ಅಗ್ನಿಪರೀಕ್ಷೆಯಾಗಿದೆ.

https://twitter.com/BCCI/status/1217778699518431232?s=19

ಬ್ಯಾಟಿಂಗ್ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ವಿಫಲತೆಯನ್ನು ಕಂಡಿದ್ದ ಭಾರತ ತಂಡವು ಈ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಈ ಸರಣಿಯಲ್ಲಿ ಸಮಬಲ ಸಾಧಿಸುವ ನಿಟ್ಟಿನಲ್ಲಿ ಸಜ್ಜಾಗಿದೆ.

ತಂಡದ ಎಲ್ಲಾ ಆರಂಭಿಕ ಬ್ಯಾಟ್ಸ್‌ಮನ್ಸ್ ತೋರುತ್ತಿರುವ ಉತ್ತಮ ಪ್ರದರ್ಶನದಿಂದ ತಂಡದ ನಾಯಕ ವಿರಾಟ್ ಕೊಹ್ಲಿಗೆ ನಂಬರ್ 3 ಸ್ಥಾನವನ್ನು ಯಾರಿಗೆ ಕೊಡುವುದು ಎಂಬ ಯಕ್ಷ ಪ್ರಶ್ನೆ ಕಾಡುತ್ತಿದ್ದು ಇಂದಿನ ಪಂದ್ಯದಲ್ಲಿ ಯಾವ ಬದಲಾವಣೆಯನ್ನು ಮಾಡುತ್ತಾರೋ ಎಂದು ಕಾದುನೋಡಬೇಕಾಗಿದೆ.

ಬೌಲಿಂಗ್ ವಿಭಾಗದಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ ಬೌಲರ್ ಗಳಿಂದ ಹಿಂದಿನ ಪಂದ್ಯದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ.

ಇತ್ತ ಆಸ್ಟ್ರೇಲಿಯ ತಂಡವು ಭರ್ಜರಿ ಯಶಸ್ವಿನ ನಂತರ ಹಿಂದಿನ ಪಂದ್ಯದ ಆಟಗಾರರನ್ನು ಆಡಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿದೆ. ಒಟ್ಟಿನಲ್ಲಿ ಭಾರತ ತಂಡವು ತನ್ನ ಹಿಂದಿನ ಪಂದ್ಯದ ವೈಫಲ್ಯದಿಂದ ಹೊರಬಂದು ಉತ್ತಮ ಪ್ರದರ್ಶನ ನೀಡಿದರೆ ಪ್ರೇಕ್ಷಕರಿಗೆ ಒಂದು ರೋಚಕಕಾರಿ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

ತಂಡಗಳು :
ಸಂಭವನೀಯ ಟೀಂ ಇಲೆವೆನ್ ಭಾರತ ತಂಡ : ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮಹಮದ್ ಶಮಿ, ನವದೀಪ್ ಸೈನಿ, ಜಸ್ಪ್ರೀತ್ ಬುಮ್ರಾ.

ಸಂಭವನೀಯ ಟೀಮ್ ಇಲೆವೆನ್ ಆಸ್ಟ್ರೇಲಿಯಾ ತಂಡ:
ಅರುನ್ ಫಿಂಚ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಷನೆ, ಅಶ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ , ಅಶ್ಟನ್ ಆಗರ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ನ್ಸ್, ಕೆನ್ ರೀಚರ್ಡ್ಸಸನ್, ಅಡಂ ಝಂಪ.

Author: Ugly Indian

Simple♥, Humble♥, Generous♥, L♥vable, and Goes on....♥♥ ツ Engineering by Choice, Banker as a Profession 😉. Photography has become my favourite activity since my Engineering days, and now it turned out to be a part of my Life. It's my Passion actually ☺ and Blogging is adding cherry to the cake for my Photography! 😆

Leave a comment